ಅಭಿಜಿತ್ ವಿನಾಯಕ್ ಬ್ಯಾನರ್ಜಿ (೨೧ ಫೆಬ್ರವರಿ ೧೯೬೧)ರವರೊಒಬ್ಬ ಅಮೇರಿಕನ್ ಅರ್ಥಶಾಸ್ತ್ರಜ್ಞ ಹಾಗೂ ಮೆಸಾಚುಸೆಟ್ಸ್‌ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಫೋರ್ಡ್ ಫೌಂಡೇಷನ್ ಇಂಟರ್ನ್ಯಾಷನಲ್ ನ ಎಕನಾಮಿಕ್ಸ್ ಪ್ರೊಫೆಸರ್ . ಇವರು ೨೦೧೯ ರಲ್ಲಿ ಅರ್ಥಶಾಸ್ತ್ರದಲ್ಲಿ ನೊಬೆಲ್ ಸ್ಮಾರಕ ಪ್ರಶಸ್ತಿಯನ್ನು ಎಸ್ತರ್ ಡುಫ್ಲೋ ಮತ್ತು ಮೈಕೆಲ್ ಕ್ರೆಮರ್ ಅವರೊಂದಿಗೆ ಜಾಗತಿಕ ಬಡತನವನ್ನು ನಿವಾರಿಸುವ ಪ್ರಾಯೋಗಿಕ ವಿಧಾನಕ್ಕಾಗಿ ಹಂಚಿಕೊಂಡರು. ಬ್ಯಾನರ್ಜಿಯವರು ಅಬ್ದುಲ್ ಲತೀಫ್ ಜಮೀಲ್ ಪಾವರ್ಟಿ ಆಕ್ಷನ್ ಲ್ಯಾಬ್‌ನ ಸಹ-ಸಂಸ್ಥಾಪಕ (ಅರ್ಥಶಾಸ್ತ್ರಜ್ಞರಾದ ಎಸ್ತರ್ ಡುಫ್ಲೋ ಮತ್ತು ಸೆಂಧಿಲ್ ಮುಲೈನಾಥನ್ ರವರೊಂದಿಗೆ) . ಇವರು ಇನೋವೇಷನ್ಸ್‌ ಫಾರ್‌ ಪೊವರ್ಟಿ ಆಕ್ಷನ್, ಹಣಕಾಸು ವ್ಯವಸ್ಥೆಗಳು ಮತ್ತು ಬಡತನದ ಒಕ್ಕೂಟದ ಸದಸ್ಯರಾಗಿದ್ದಾರೆ . ನ್ಯಾಷನಲ್ ಬ್ಯೂರೋ ಆಫ್ ಎಕನಾಮಿಕ್ ರಿಸರ್ಚ್‌ನ ಸಂಶೋಧನಾ ಸಹವರ್ತಿಯಾದ ಬ್ಯಾನರ್ಜಿ ಬ್ಯೂರೋ ಫಾರ್ ದಿ ರಿಸರ್ಚ್ ಇನ್ ದಿ ಎಕನಾಮಿಕ್ ಅನಾಲಿಸಿಸ್ ಆಫ್ ಡೆವಲಪ್‌ಮೆಂಟ್‌ನ ಅಧ್ಯಕ್ಷರಾಗಿದ್ದರು. ಇವರು ಸೆಂಟರ್ ಫಾರ್ ಎಕನಾಮಿಕ್ ಪಾಲಿಸಿ ರಿಸರ್ಚ್ ನಲ್ಲಿ ಸಂಶೋಧನಾ ಸಹೋದ್ಯೋಗಿ , ಕೀಲ್ ಇನ್ಸ್ಟಿಟ್ಯೂಟ್ ನ ಅಂತರರಾಷ್ಟ್ರೀಯ ಸಂಶೋಧನಾ ಸಹೋದ್ಯೋಗಿ , ಅಮೇರಿಕನ್ ಅಕಾಡೆಮಿ ಆಫ್ ಆರ್ಟ್ಸ್ ಅಂಡ್ ಸೈನ್ಸಸ್ ನಲ್ಲಿ ಸಹವರ್ತಿ ಮತ್ತು ಎಕೋನೊಮೆಟ್ರಿಕ್ ಸೊಸೈಟಿಯಲ್ಲಿ ಸಹವರ್ತಿ. == ಆರಂಭಿಕ ಜೀವನ == ಬ್ಯಾನರ್ಜಿ ಭಾರತದ ಮುಂಬೈಯಲ್ಲಿ ಜನಿಸಿದರು . ಇವರ ತಂದೆ ದೀಪಕ್‌ ಬ್ಯಾನರ್ಜಿ ಮತ್ತು ತಾಯಿ ನಿರ್ಮಲಾ ಬ್ಯಾನರ್ಜಿ . ಇವರು ಕೋಲ್ಕತ್ತಾದ ಪ್ರಸಿದ್ಧ ಶಿಕ್ಷಣ ಸಂಸ್ಥೆಯಾದ ಸೌತ್ ಪಾಯಿಂಟ್ ಪ್ರೌಢ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪಡೆದರು. == ವೃತ್ತಿ == ಬ್ಯಾನರ್ಜಿ ಯವರು ಪ್ರಸ್ತುತವಾಗಿ ಮೆಸಾಚುಸೆಟ್ಸ್‌ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಫೋರ್ಡ್ ಫೌಂಡೇಶನ್ ಇಂಟರ್ನ್ಯಾಷನಲ್ ಪ್ರೊಫೆಸರ್ ಆಫ್ ಎಕನಾಮಿಕ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ; ಇವರು ಹಾರ್ವರ್ಡ್ ವಿಶ್ವವಿದ್ಯಾಲಯ ಮತ್ತು ಪ್ರಿನ್ಸ್ಟನ್ ವಿಶ್ವವಿದ್ಯಾಲಯದಲ್ಲೂ ಕಾರ್ಯ ನಿರ್ವಹಿಸಿದ್ದಾರೆ . == ಪ್ರಕಟಣೆಗಳು == === ಪುಸ್ತಕಗಳು === ವೊಲಟಿಲಿಟಿ ಅಂಡ್‌ ಗ್ರೋತ್‌ (ಚಂಚಲತೆ ಮತ್ತು ಬೆಳವಣಿಗೆ) . ಅಂಡರ್ಸ್ಟ್ಯಾಂಡಿಗ್ ಪೊವರ್ಟಿ . ‌ ಮೇಕಿಂಗ್‌ ಅಂಡ್‌ ವರ್ಕ್‌ . ಪೂವರ್‌ ಎಕನಾಮಿಕ್ಸ್‌ : ಎ ರ‍್ಯಾಡಿಕಲ್ ರಿಥಿಂಕಿಂಗ್‌ ಆಫ್‌ ದಿ ವೇ ಟು ಫೈಟ್‌ ಗ್ಲೋಬಲ್‌ ಪೊವರ್ಟಿ . ಹ್ಯಾಂಡ್ ಬುಕ್‌ ಆಫ್‌ ಫೀಲ್ಡ್‌ ಎಕ್ಸ್ಪರಿಮೆಂಟ್ಸ್ , ಸಂಪುಟ ೧ . ಹ್ಯಾಂಡ್ ಬುಕ್‌ ಆಫ್‌ ಫೀಲ್ಡ್‌ ಎಕ್ಸ್ಪರಿಮೆಂಟ್ಸ್ , ಸಂಪುಟ ೨ . ಎ ಶೋರ್ಟ್‌ ಹಿಸ್ಟರಿ ಆಫ್‌ ಪೊವರ್ಟಿ ಮೆಷರ್ಮೆಂಟ್ಸ್‌ . ಗುಡ್‌ ಎಕನಾಮಿಕ್ಸ್‌ ಫಾರ್‌ ಹಾರ್ಡ್‌ ಟೈಮ್ಸ್‌ . == ಪ್ರಶಸ್ತಿಗಳು == === ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ === ಅಭಿಜಿತ್ ಬ್ಯಾನರ್ಜಿಯವರಿಗೆ ೨೦೧೯ ರಲ್ಲಿ ಅರ್ಥಶಾಸ್ತ್ರದಲ್ಲಿ, ಅವರ ಇಬ್ಬರು ಸಹ-ಸಂಶೋಧಕರಾದ ಎಸ್ತರ್ ಡುಫ್ಲೋ ಮತ್ತು ಮೈಕೆಲ್ ಕ್ರೆಮರ್ ಅವರೊಂದಿಗೆ ಜಾಗತಿಕ ಬಡತನವನ್ನು ನಿವಾರಿಸುವ ಪ್ರಾಯೋಗಿಕ ವಿಧಾನಕ್ಕಾಗಿ ನೊಬೆಲ್‌ ಪ್ರಶಸ್ತಿಯನ್ನು ನೀಡಲಾಯಿತು . == ಉಲ್ಲೇಖಗಳು ==